ಅರೋಗ್ಯ ಕೇಂದ್ರ

ಜ್ಞಾನ ಭಾರತಿ ಆವರಣದಲ್ಲಿ ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ಇದು ವಿಶ್ವವಿದ್ಯಾಲಯದ ಸಿಬ್ಬಂದಿ ಮತ್ತು  ವಿದ್ಯಾರ್ಥಿಗಳ ಮೂಲಭೂತ ವೈದ್ಯಕೀಯ ಅಗತ್ಯಗಳನ್ನು ಪೂರೈಸುತ್ತದೆ, ಅರೋಗ್ಯ ಕೇಂದ್ರದ ಕಾರ್ಯಚಟುವಟಿಕೆಯ ನಿರ್ವಹಣೆಯನ್ನುಇಬ್ಬರು ಹಿರಿಯ ವೈದ್ಯಾಧಿಕಾರಿಗಳು ಸಹಾಯಕ ಸಿಬ್ಬಂದಿ ಜೊತೆಗೆ ನಿಭಾಯಿಸುತ್ತಿದ್ದಾರೆ. ಅರೋಗ್ಯ ಕೇಂದ್ರದ ಕಾರ್ಯ ನಿರ್ವಹಿಸುವಲ್ಲಿ ತಂತ್ರಜ್ಞರು ಬೆಂಬಲ ನೀಡುತ್ತಾರೆ. ಔಷದಿಯ ವಿತರಣೆ, ECG ತೆಗೆಯುವ ಮತ್ತು ರಕ್ತ ಗ್ಲುಕೋಸ್ ಅನ್ನು ಗ್ಲುಕೋಮೀಟರ್ ಮೂಲಕ ಪರೀಕ್ಷಿಸುವ ಜ್ಞಾನವನ್ನು ಹೊಂದಿದ್ದಾರೆ. ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳನ್ನು ನಿರ್ವಹಿಸುವ ಅನುಭವವುಳ್ಳ ಸ್ಟಾಫ್  ನರ್ಸ್ ಗಳನ್ನು ಸಹ  ಹೆಲ್ತ್ ಸೆಂಟರ್ ಹೊಂದಿದೆ. ಆರೋಗ್ಯ ಕೇಂದ್ರವು ಬಿಪಿ / ಎದೆ ನೋವು ಮತ್ತು ಇತರ ತುರ್ತುಪರಿಸ್ಥಿತಿಗಳಲ್ಲಿ ತಾತ್ಕಾಲಿಕ ಮೇಲ್ವಿಚಾರಣೆಗೆ ಅಗತ್ಯವಿರುವ ಸಮಯದಲ್ಲಿ ಹಾಗು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಗೊಳ್ಳುವ ತನಕ ಹಾಸಿಗೆಯ ವ್ಯವಸ್ಥೆಯನ್ನು  ಹೊಂದಿದೆ.

ಹೆಲ್ತ್ ಸೆಂಟರ್  ಹೊರರೋಗಿಯ ವಾರ್ಡ್ , ಜನರಲ್ ಲ್ಯಾಬ್ , ಎಕ್ಸರೆ ಲ್ಯಾಬ್ , ಡ್ರಗ್ ವಿತರಿಸುವ ಕೇಂದ್ರ ಗಳನ್ನು ಹೊಂದಿದೆ

ಸುಮಾರು 14000 ರೋಗಿಗಳು ಪ್ರತಿ ವರ್ಷ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. 

×
ABOUT DULT ORGANISATIONAL STRUCTURE PROJECTS